ಪನೀರ್ ಟಿಕ್ಕಾ ಪನೀರ್‌ನ ತುಂಡುಗಳಿಂದ ತಯಾರಿಸಲ್ಪಡುವ ಒಂದು ಭಾರತೀಯ ಖಾದ್ಯವಾಗಿದೆ. ತುಂಡುಗಳನ್ನು ಸಂಬಾರ ಪದಾರ್ಥಗಳಲ್ಲಿ ಊರಿಟ್ಟು ತಂದೂರ್‌ನಲ್ಲಿ ಬೇಯಿಸಲಾಗುತ್ತದೆ. ಇದು ಚಿಕನ್ ಟಿಕ್ಕಾ ಮತ್ತು ಇತರ ಮಾಂಸದ ಖಾದ್ಯಗಳ ಸಸ್ಯಾಹಾರಿ ಪರ್ಯಾಯವಾಗಿದೆ. ಇದು ಭಾರತದಲ್ಲಿ ಮತ್ತು ಭಾರತೀಯ ವಲಸಿಗರಿರುವ ದೇಶಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ಒಂದು ಜನಪ್ರಿಯ ಖಾದ್ಯವಾಗಿದೆ. ಸಂಬಾರ ಪದಾರ್ಥಗಳಲ್ಲಿ ಊರಿಟ್ಟ ಪನೀರ್‌ನ ತುಂಡುಗಳನ್ನು ಕ್ಯಾಪ್ಸಿಕಂ, ಈರುಳ್ಳಿ ಮತ್ತು ಟೊಮೇಟೊದೊಂದಿಗೆ ಒಂದು ಕೋಲಿನ ಮೇಲೆ ಜೋಡಿಸಲಾಗುತ್ತದೆ. ಈ ಕೋಲುಗಳನ್ನು ತಂದೂರ್‌ನಲ್ಲಿ ಬೇಯಿಸಲಾಗುತ್ತದೆ ಮತ್ತು ತಯಾರಾದ ಖಾದ್ಯವನ್ನು ನಂತರ ನಿಂಬೆ ರಸ ಹಾಗೂ ಚಾಟ್ ಮಸಾಲಾ ಹಾಕಿ ರುಚಿಗೊಳಿಸಿ ಬಿಸಿಯಾಗಿ ಬಡಿಸಲಾಗುತ್ತದೆ. == ಉಲ್ಲೇಖಗಳು ==